ಹಿರಿಯ ನಿರ್ಮಾಪಕ, ವಿತರಕ ಎ ಆರ್ ರಾಜು ನಿಧನ
Posted date: 05 Wed, Nov 2014 – 12:19:39 PM

ಹಿರಿಯ ನಿರ್ಮಾಪಕವಿತರಕ, ಸ್ನೇಹಜೀವಿ, ಅನೇಕ ಪ್ರತಿಬೆಗಳಿಗೆ ದಾರಿ ಮಾಡಿ ಕೊಟ್ಟ ಎ ಆರ್ ರಾಜು ಅಜಂತಾ ರಾಜು ಎಂದೇ ಪ್ರಸಿದ್ದಿ ಅದವರು ಇಂದು ಬೆಳಗ್ಗೆ ಮಂಗಳವಾರ 5ನೇ ನವೆಂಬರ್ ವಿದಿವಶರಾದರು.  ಹೃದಯಾಘಾತದಿಂದ ಅಸ್ವಸ್ಥರಾಗಿ ನಗರದ ಎಂ ಎಸ್ ರಾಮಯ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎ ಆರ್ ರಾಜು ಅವರ ಪಾರ್ಥೀವ ಶರಿವನ್ನು ಅವರ ಸ್ವಗೃಹ ಸಂಜಯ ನಗರದಲ್ಲಿ ಅಂತಿಮ ದರ್ಶನಕ್ಕೆ ತರಲಾಯಿತು.

ಎ ಆರ್ ರಾಜು 25ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಪಕರು. ಒಂದು ರೂಪಾಯಿ ಸಂಬಳದಿಂದ ಗುಪ್ತಾ ಅವರ ಬಳಿ ಆರ್ ಪಿ ವೃತ್ತಿ ಅನ್ನು 18 ನೇ ವಯಸ್ಸಿನಲ್ಲೇ ಆರಂಬಿಸಿದರು. 1940 ಸೆಪ್ಟೆಂಬರ್ 13 ರಂದು ಜನಿಸಿದ ರಾಜು ಅವರು 50 ವರ್ಷಗಳ ಸತತ ಸೇವೆ ಕನ್ನಡ ಸಿನಿಮಾ ರಂಗಕ್ಕೆ ಸಲ್ಲಿಸಿದ್ದಾರೆ.

ಜಲದುರ್ಗ’ ಸಿನಿಮದಿಂದ ಅವರು ಪ್ರತಿನಿದಿಯಾಗಿ ವೃತ್ತಿ ಆರಂಭಿಸಿ ಮೂರು ವರ್ಷಗಳ ನಂತರ ವಿದ್ಯಾಭ್ಯಾಸದ ಹಂತದಲ್ಲೇ ಅವರು ‘ಬಾಲಾಜಿ ಪಿಕ್ಚರ್ಸ್’ ಆರಂಬಿಸಿದರು. ಅಜಂತಾ ಮೂವೀಸ್ ಸಂಸ್ಥೆಯನ್ನು 1964 ರಲ್ಲಿ ಆರಂಭಿಸಿ ತಮಿಳುತೆಲುಗು,ಹಿಂದಿ ಚಿತ್ರಗಳ ವಿತರಣೆ ಮಾಡಿದ ಖ್ಯಾತಿ ಇವರಿಗಿದೆ.

1977 ಅಜಂತಾ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣಕ್ಕೂ ಕಾಲಿಟ್ಟರು. ಇಂದಿನ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಪೂರ್ಣ ಪ್ರಮಾಣದ ನಾಯಕನಾಗಿ ಡಾಕ್ಟರ್ ವಿಷ್ಣುವರ್ಧನ ಅವರ ಜೊತೆ ನಿರ್ಮಿಸಿದ ‘ಸಹೋದರರ ಸವಾಲ್ಅಂದಿಗೆ ಸಿಲ್ವರ್ ಜುಬಿಲಿ ಆಚರಿಸಿತು. ಸ್ನೇಹಿತರ ಸವಾಲ್ಸಿಂಹ ಜೋಡಿಸಿಂಹ ಘರ್ಜನೆಊರಿಗೆ ಉಪಕಾರಿಸತಿ ಶಕ್ಕುಬಾಯಿಪೂಜಾ ಫಲ, ‘ಬೆಳ್ಳಿ ನಾಗ’, ‘ವಜ್ರದ ಜಲಪಾತ’, ಅಸಾಧ್ಯ ಅಳಿಯಸಿಂಹಾಸನವಿಜಯ ವಿಕ್ರಮ್ ಹಾಗೂ ಇನ್ನಿತರ ಸಿನಿಮಗಳು ಜನಪ್ರಿಯಗೊಂಡವು.

1981-82 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರುಎಫ್ ಎಫ್ ಐಎಸ್ ಐ ಎಫ್ ಸಿ ಸಿಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಎ ಆರ್ ರಾಜು ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಪ್ರತಿಸ್ಥಿತ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಜೀವ ಮಾನ ಸಾಧನೆಗಾಗಿ ಇವರು ಕರ್ನಾಟಕ ಸರ್ಕಾರದಿಂದ ಪಡೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed